ಯೋಜನೆಯ ಮಾರ್ಗಸೂಚಿಗಳು
English
 1. ಆಹಾರ ವಾಹಿನಿ ಪ್ರಾರಂಭಿಸಲು ಬ್ಯಾಂಕ್‍ಗಳಿಂದ ಸಾಲ ಪಡೆದಂತಹ ಫಲಾನುಭವಿಗಳಿಗೆ ಈ ಕೆಳಕಂಡಂತೆ ಸಹಾಯಧನ ನಿಗಮದಿಂದ ನೀಡಲಾಗುವುದು.
 2. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6,00,000/-ಗಳ ಮಿತಿ ಒಳಗಿರಬೇಕು.
 3. ಅರ್ಜಿದಾರರು 21 ವರ್ಷ ಮೇಲ್ಪಟ್ಟು 55 ವರ್ಷ ಒಳಗಿನವರಾಗಿರಬೇಕು.
 4. ಮಹಿಳೆಯರಿಗೆ ಶೇ.33ರಷ್ಟು, ವಿಶೇಷಚೇತನರಿಗೆ ಶೇ.5ರಷ್ಟು ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳಿಗೆ ಶೇ.5ರಷ್ಟು ಮೀಸಲಾತಿ ಇರುತ್ತದೆ.
 5. ಒಂದು ಕುಟುಂಬದಲ್ಲಿ ಒಂದು ಅಭ್ಯರ್ಥಿಗೆ ಮಾತ್ರ ಅವಕಾಶವಿರುತ್ತದೆ.
 6. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಡ್ರೈವಿಂಗ್ ಲೈಸೆನ್ಸ್ ಉಳ್ಳ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡುವುದು.
 7. ಆಯ್ಕೆ ಸಮಿತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳ / ಸಹಕಾರ ಸಂಘಗಳ / ಸಹಕಾರ ಬ್ಯಾಂಕ್‍ಗಳ / ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳ / Schedule Bank ಗಳ / ಅಂಗೀಕೃತ ಸರ್ಕಾರೇತರ ಹಣಕಾಸು ಸಂಸ್ಥೆಗಳ ಸಹಯೋಗದಿಂದ ಸಾಲ ಮಂಜೂರಾಗಿರುವ ಮೊತ್ತಕ್ಕೆ ಸಹಾಯಧನವನ್ನು ಸಂಬಂಧಪಟ್ಟ ಹಣಕಾಸು ಸಂಸ್ಥೆಗಳಿಗೆ ನೇರವಾಗಿ ಅಥವಾ ಸಂಬಂಧಪಟ್ಟ ವಾಹನ ಡೀಲರ್ (Authorized Dealers) ಗಳಿಗೆ ಮೊದಲನೇ ಕಂತು ಸಹಾಯಧನ ಬಿಡುಗಡೆ ಮಾಡಲಾಗುವುದು.
 8. ಈ ಯೋಜನೆಯಲ್ಲಿ ಅಭ್ಯರ್ಥಿಯು ಕಡ್ಡಾಯವಾಗಿ ನೂತನ ವಾಹನವನ್ನು ಖರೀದಿಸಿ ಸಂಬಂಧಪಟ್ಟ ಆರ್.ಟಿ.ಒ ಕಛೇರಿಯಲ್ಲಿ ನೋಂದಾಯಿಸಬೇಕು.
 9. ಬ್ಯಾಂಕ್ / ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳನ್ನು ಅವರ ಷರತ್ತಿನನ್ವಯ ನಿಗಧಿಪಡಿಸಿದ ಕಂತುಗಳಲ್ಲಿ ಅಸಲು ಮತ್ತು ಬಡ್ಡಿಯನ್ನು ಮರುಪಾವತಿಸಬೇಕು.
 10. ಈ ಯೋಜನೆಯಲ್ಲಿ ಸಹಾಯಧನವನ್ನು ಪಡೆದ ಅಭ್ಯರ್ಥಿಯು ಆಹಾರ ವಾಹಿನಿಯನ್ನು 5 ವರ್ಷಗಳ ಅವಧಿಯೊಳಗೆ ಮಾರಾಟ ಮಾಡಬಾರದು.
 11. ಆಹಾರವಾಹಿನಿಗಳನ್ನು ಪ್ರಾರಂಭಿಸಲು Franchise ಪಡೆಯಲು ಸಹ ಅವಕಾಶವಿರುತ್ತದೆ.
 12. ಆಯ್ಕೆಯಾದ ಅಭ್ಯರ್ಥಿಗಳು ನಿಗಮವು ವಿಧಿಸುವ ಎಲ್ಲಾ ಷರತ್ತುಗಳು ಹಾಗೂ ಕೋರುವ ಎಲ್ಲಾ ದಾಖಲೆಗಳನ್ನು ನೀಡಬೇಕು.
 13. ಈ ಹಿಂದೆ ನಿಗಮದ ಯಾವುದೇ ಯೋಜನೆಗಳಲ್ಲಿ ಸಾಲ-ಸಹಾಯಧನ ಪಡೆದಿದ್ದಲ್ಲಿ ಅಂತಹ ಅಭ್ಯರ್ಥಿಗಳು ಹಾಗೂ ಅವರ ಕುಂಟುಂಬದ ಸದಸ್ಯರುಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಸಾಮಾನ್ಯ ಅರ್ಹತೆಗಳು
 1. ಆರ್ಯ ವೈಶ್ಯ ಅರ್ಜಿದಾರರು “ನಮೂನೆ-ಜಿ” ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು (ಪ್ರಮಾಣ ಪತ್ರವು ಚಾಲ್ತಿಯಲ್ಲಿರಬೇಕು).
 2. ಅರ್ಜಿದಾರರು ಕರ್ನಾಟಕ ರಾಜ್ಯವರಾಗಿರಬೇಕು ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು.
 3. ಅರ್ಜಿದಾರರು ಮೊಬೈಲ್ ಸಂಖ್ಯೆಯನ್ನು ಹಾಗೂ ಬ್ಯಾಂಕ್ ಖಾತೆಯನ್ನು ಆಧಾರ್‍ಗೆ ಜೋಡಣೆ ಮಾಡಿರಬೇಕು.