ಯೋಜನೆಯ ಮಾರ್ಗಸೂಚಿಗಳು
English
 1. ಈ ಯೋಜನೆಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಇತ್ಯಾದಿ ವೃತ್ತಿಪರ ಪದವಿ, ಸ್ನಾತಕೋತ್ತರ ಮತ್ತು ಪಿ.ಎಚ್.ಡಿ., ಕೋರ್ಸ್‌ ಗಳಲ್ಲಿ ಸಿ.ಇ.ಟಿ. ಮೂಲಕ ಆಯ್ಕೆಯಾಗಿ ವ್ಯಾಸಂಗ ಮಾಡುವ ಆರ್ಯ ವೈಶ್ಯ ಸಮುದಾಯದ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ. 2ರ ಬಡ್ಡಿ ದರದಲ್ಲಿ ವಾರ್ಷಿಕ ಗರಿಷ್ಠ ರೂ.1,00,000/-ಗಳ ಶೈಕ್ಷಣಿಕ ಸಾಲವನ್ನು ಮಂಜೂರು ಮಾಡುವುದು.
 2. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6,00,000/-ಗಳ ಮಿತಿಯೊಳಗಿರಬೇಕು.
 3. ಅರ್ಜಿದಾರರು 18 ವರ್ಷ ಮೇಲ್ಪಟ್ಟು 35 ವರ್ಷದೊಳಗಿನವರಾಗಿರಬೇಕು.
 4. ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಶೇ.33ರಷ್ಟು ಮಹಿಳಾ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಮತ್ತು ಶೇ.5ರಷ್ಟು ಅಂಗವಿಕಲ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
 5. ಒಂದು ಕುಟುಂಬದಲ್ಲಿ ಎರಡು ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು.
 6. ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರಿಂದ ನಿಗಧಿಪಡಿಸಿರುವ ಸಿ.ಇ.ಟಿ ಫೀ, ಪ್ರವೇಶ ಶುಲ್ಕ, ಟ್ಯೂಷನ್ ಫೀ, ಹಾಸ್ಟೆಲ್ ಫೀ, ಪುಸ್ತಕ, ಲ್ಯಾಪ್‌ಟಾಪ್, ಪರೀಕ್ಷಾ ಶುಲ್ಕ ಇತ್ಯಾದಿ ಶುಲ್ಕಗಳಿಗಾಗಿ ವಾರ್ಷಿಕ ರೂ.1,00,000/-ಗಳ ಮಿತಿಯೊಳಗೆ ಸಾಲ ನೀಡಲಾಗುವುದು. ಸಿ.ಇ.ಟಿ / ನೀಟ್ ಮುಖಾಂತರ ಪ್ರವೇಶ ಪಡೆದ ಕಾಲೇಜಿನ ಪ್ರಾಂಶುಪಾಲರಿಂದ ಧೃಡೀಕೃತ ಫೀ ಸ್ಟ್ರಕ್ಚರ್ ಅನ್ವಯ ಸಾಲ ನೀಡಲಾಗುವುದು.
 7. ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ಕಾಲೇಜಿನಲ್ಲಿಯೇ ಹಾಸ್ಟೆಲ್ ಸೌಲಭ್ಯ ಪಡೆದಿದ್ದಲ್ಲಿ ಪ್ರಾಂಶುಪಾಲರು ಅಥವಾ ಹಾಸ್ಟೆಲ್ ವಾರ್ಡನ್ ರವರಿಂದ ದೃಢೀಕರಣ ಪತ್ರ ಪಡೆದು ಸಲ್ಲಿಸಬೇಕು.
 8. ಈ ಯೋಜನೆ ಅಡಿಯಲ್ಲಿ ಪಡೆದ ಸಾಲವನ್ನು 3 ವರ್ಷಗಳ ಅವಧಿಯಲ್ಲಿ 36 ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿ ಸೇರಿಸಿ ಮರುಪಾವತಿಸಬೇಕು ಹಾಗೂ ವಿದ್ಯಾರ್ಥಿಯು ವ್ಯಾಸಂಗ ಪೂರ್ಣಗೊಂಡ 4ನೇ ತಿಂಗಳಿಂದ ಮರು ಪಾವತಿಸಬೇಕು, ಇದರಲ್ಲಿ 4 ತಿಂಗಳು ವಿರಾಮ ಅವಧಿ ಇರುತ್ತದೆ.
ಸಾಮಾನ್ಯ ಅರ್ಹತೆಗಳು
 1. ಅರ್ಜಿದಾರರು ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದವರಾಗಿರಬೇಕು ಮತ್ತು ನಮೂನೆ-ಜಿ ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು
 2. ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು.
 3. ಅರ್ಜಿದಾರರು ಆಧಾರ್ ಕಾರ್ಡ್ ಹೊಂದಿರಬೇಕು, ಮೊಬೈಲ್ ಸಂಖ್ಯೆಯು ಆಧಾರ್‌ಗೆ ಜೋಡಣೆಯಾಗಿರಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿರಬೇಕು.
 4. ಅರ್ಹ ಫಲಾನುಭವಿಗಳನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ಮೂಲಕ ಆಯ್ಕೆ ಮಾಡಲಾಗುವುದು.

ಸಲ್ಲಿಸಬೇಕಾದ ದಾಖಲೆಗಳು (500 KB ಒಳಗಿರಬೇಕು)
 1. ಸಿ.ಇ.ಟಿ ಪ್ರವೇಶ ಸಂಖ್ಯೆ ಪ್ರತಿ.
 2. ಕಳೆದ ವರ್ಷದ ಅಂಕಪಟ್ಟಿ
 3. ಪ್ರಾಂಶುಪಾಲರು ದೃಢೀಕರಿಸಿದ ಪ್ರಸ್ತುತ ಸಾಲಿನ ವ್ಯಾಸಂಗ ಪ್ರಮಾಣ ಪತ್ರ.
 4. ಪ್ರಾಂಶುಪಾಲರು ದೃಢೀಕರಿಸಿದ ಪೂರ್ಣ ವ್ಯಾಸಂಗದ ಫೀ ಸ್ಟ್ರಕ್ಚರ್ ಪ್ರತಿ.
 5. ಕಾಲೇಜಿನಲ್ಲಿಯೇ ಹಾಸ್ಟೆಲ್ ಸೌಲಭ್ಯ ಪಡೆದಿದ್ದಲ್ಲಿ ಪ್ರಾಂಶುಪಾಲರು ಅಥವಾ ಹಾಸ್ಟೆಲ್ ವಾರ್ಡನ್ ರವರಿಂದ ದೃಢೀಕರಣ ಪ್ರತಿ